Thursday, November 15, 2012

ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ .....


ಗೆಳೆಯರೇ ,

ಮನದಾಳದ ಮಾತೆ ಪ್ರೀತಿ,
ಮೌನದ ಆಳವೆ ಪ್ರೀತಿ,
ಜೀವನದ ಬೇರು ಪ್ರೀತಿ,
ನಂಬಿಕೆಯ ಮರವೆ ಪ್ರೀತಿ,
ಅತ್ಮವಿಸ್ವಸದ ಚಿಲುಮೆ ಪ್ರೀತಿ,
ತಾಳ್ಮೆಯ ಒಡಲು ಪ್ರೀತಿ ,
ಸ್ನೇಹದ ಹೂವೇ ಪ್ರೀತಿ,
ಮರೆಯದ ನೆನಪೆ ಪ್ರೀತಿ,
ದಡವಿಲ್ಲದ ಸಮುದ್ರವೆ ಪ್ರೀತಿ,
ಕೊನೆ ಇಲ್ಲದ ಮುಗಿಲೇ ಪ್ರೀತಿ, 
ಗುರು ಇಲ್ಲದ ಕಲಿಕೆಯೇ ಪ್ರೀತಿ,
ಮಮತೆಯ ತಾಯಿಯೇ ಪ್ರೀತಿ,
ಬೆಸುಗೆಯ ತಂದೆಯೇ ಪ್ರೀತಿ ,
ತುದಿಇರದ ಕವನವೇ ಪ್ರೀತಿ,
ಮುಗಿಯದ ಕಥೆಯೆ ಪ್ರೀತಿ,
ಕಾಣುವ ಸ್ವರ್ಗವೇ ಪ್ರೀತಿ ,
ಕೈಸಿಗುವ ಕಾಮನಬಿಲ್ಲೆ ಪ್ರೀತಿ,
ಸಂಜೆಯ ತಂಗಾಳಿಯೇ ಪ್ರೀತಿ ,
ಬೆಳಗಿನ ರವಿಕಿರಣವೇ ಪ್ರೀತಿ,
ನೋವಲ್ಲಿನ ಸುಖವೇ ಪ್ರೀತಿ,
ಜೇನಲ್ಲಿನ ಸಿಹಿಯೇ ಪ್ರೀತಿ,
ಮನಸೊಳಗಿನ ನಗುವೇ ಪ್ರೀತಿ......


ಮಾಬ್ಲು/ಸುವಿ 

1 comment:

  1. ಮಾಬ್ಲು ಅವರೇ, ನಿಮಗೆ ಪ್ರೀತಿ ಹಾಗೂ ಅದರ ವ್ಯಾಖ್ಯಾನ ಸಿಕ್ಕಿದ್ದು ಸಂತೋಷದ ಸಂಗತಿ. ಶುಭಾಶಯಗಳು..:)

    ReplyDelete