Thursday, November 15, 2012

""ಕುಮಾರ ಪರ್ವತ"" ಚಾರಣದ ಒಂದು ಇಣುಕು ನೋಟ ......... ಚಾರಣಿಗಾಸ್ ರೆಡಿ ......

ಹಾಯ್ ಗೆಳೆಯರೇ ....

ಅಂದು ನವೆಂಬರ್  9  ಶುಕ್ರುವಾರ ---  ರಾತ್ರಿ ಸಮಯ ಸರಿಯಾಗಿ 12 ಗಂಟೆ ...

ಎಲ್ಲ ಚಾರಣಿಗರಿಗೂ ಎಲ್ಲಿಂದ ಉತ್ಸಾಹ ಬಂದಿತ್ತೋ ಗೊತ್ತಿಲ್ಲ ... ಎಲ್ಲರೂ  ಬಂಡಿಯನ್ನು ಏರಿ ಹಾಡಿಗೆ ತಕ್ಕಂತೆ ಕುಣಿಯಲು ಶುರು ಇಟ್ಟುಕೊಂಡರು ...

ಸಂತೋಷಕ್ಕೆ ಚಾರಣ ಸಂತೋಷಕ್ಕೆ ....
ಕುಣಿದು ತಾಳಕ್ಕೆ ಕುಣಿದು ....    ದಣಿದು ನಂತರ ದಣಿದು ... ಎಂದೆಂದು ...
ಸಂತೋಷಕ್ಕೆ ಚಾರಣ ಸಂತೋಷಕ್ಕೆ ....

ಕುಣಿತಇದ್ದವರಿಗೆ ನಿದ್ರೆ ಯಾವಾಗ ಬಂತೋ ಗೊತ್ತಿಲ್ಲ ...ಆಗಲೇ ರಾತ್ರಿ ಮುಗಿದು ಬೆಳಕು ಹರಡಿತ್ತು ...ಆಗಾ...ಅಲ್ಲಿ ಕಂಡಿದ್ದು ಪ್ರಕಾಶಣ್ಣ .. 
ಅವ್ರು ಮೊದ್ಲೇ ಬಂದು ವಸತಿ ಏರ್ಪಾಡು ಮಾಡಿದ್ರು ...ಅಲ್ಲೇ ನಿತ್ಯಕರ್ಮವನ್ನ ಮುಗಿಸಿ, ದೇವರ ದರ್ಶನ ಪಡೆದು (ಯಾರ ಯಾರು ಏನೇನು ಕೆಳ್ಕೊದ್ರೂ  ಆ ದೇವರಿಗೆ ಗೊತ್ತು )...ಹೊರಟು ನಿಂತಾಗ >>

ನೋಡು ನೋಡು ಕಣ್ಣೆದುರು ನಿಂತಿಹಳು ..
ನಗು ನಗುತ ಪುಷ್ಪಗಿರಿ ನಿಂತಿಹಳು ..
ನಿಮ್ಮ ಶಕ್ತಿಎಲ್ಲ  ಸಕೊಗೋ--ದಿಲ್ಲ ...ನಿಮ್ಮ ಆಟವೆಲ್ಲ ಇಲ್ಲಿ ನಡೆಯೋದಿಲ್ಲ ...
ನಮ್ಮನೆಲ್ಲ  ನೋಡಿ ನಗುತಿಹಳು ....

ಇದನ್ನಾ ಕೇಳಿದ್ದೇ ತಡ ... ನಮ್ಮ ಹುಡುಗರಿಗೆ ಯೆನೈತ್ಹೋ ಶಿವನೆ ಬಲ್ಲ....

ಎಲ್ಲಿರುವೆ ಕನಸ ಕಾಣುವ ಪರ್ವತವೆ ...
ನಿನ್ನಯ ಸೊಕ್ಕನು ಒಂದೇ ದಿನದಲ್ಲೇ ಅಡಗಿಸುವೆ....

ಅದು ಪರ್ವತ ಕಣ್ರಿ ... ನಮ್ಮಂತ ಲಕ್ಷ ಮಂದಿ ನೋಡಿಬಿಟ್ಟಿದೆ ... ಅದಕ್ಕೆ ವಿಚಾರ ಮಡಿ ಅಂತ ಹೀಗೆ ಹೇಳ್ತು...

ಬಾನಿಗೊಂದು ಎಲ್ಲೇ ಎಲ್ಲಿದೆ ...
ನಿನ್ನಾಸೆ ಗೆಲ್ಲಿ ಕೊನೆ ಇದೆ...
ಏಕೆ ದೈರ್ಯ ತೋರುವೆ .. ನಿದಾನಿಸು ನಿದಾನಿಸು ...

ಅದ್ರೆ ನಮ್ಮ ಚಾರಣಿಗಾಸ್ ದಾಟಿನೆ  ಬೇರೆ....

ನಿನಗೆ ನಾನು ಹೆದರಲಾರೆ ..
ನಿನ್ನ ನೋಡಿ ನಡುಗಲಾರೆ ...
ಏನು ಏನು .. ನಮಗೆ ಸಾಟಿ ಯಾರು ಇಲ್ಲಾ ...

ಸಾಕು ಹಾಡು.. ಮೊದ್ಲು ಹತ್ತಿ ಅಂತ ಹೇಳಿದ್ದು ಕೇಳಿ ನಮ್ಮವರು ತೆಪ್ಪಗಾದರು ...
ಅಲ್ಲಿಂದ ಶುರು ಆಯಿತು ನೋಡಿ ಚಾರಣ .... 
ಒಂದೆರಡು ಬೆಟ್ಟ ಹತ್ತಿದೆ ತಡ ..ನೋಡಿ ನಮ್ಮ  ಕತೆನಾ ...

ಯಾಕೆ ಯಾಕೆ ಇ ಸುಸ್ತು ... ಎಲ್ಲಿಂದ ಬಂತು ಇ  ಬೆವರು ...
ನನ್ನಲ್ಲಿ ಇದ್ದ ಬಲ ವೆಲ್ಲಿ  ಹೊತು ...
ನಾವೆಲ್ಲ ತಂದ ನೀರೆಲ್ಲಿ ಹೋತು ...
ಇನ್ನು ನಮ್ಮ ಕಥೆ ಏನು...
ಯಾಕೆ ಯಾಕೆ ಇ ಸುಸ್ತು ... ಎಲ್ಲಿಂದ ಬಂತು ಇ  ಬೆವರು ...

ಪಾಪ ನಮ್ಮವರಿಗೆ  ಬಲ ಬೇಕಂತೆ ಬಲ ...ಯಾರು ಕೊಡ್ತಾರೆ ಅದು ಈ ಕರಿ ಕಾಡಲ್ಲಿ ..
ಅದ್ರು ಯಾರೋ ಒಬ್ರು ಬಲ ಕೊಟ್ಟಿರಬೇಕು ಅಲ್ವ...ಅದು ಹೀಗಿದೆ ಕೇಳಿ ..

ಮುತ್ತಿನಂತ ಮಾತೊಂದು ಗೊತ್ತೇನಮ್ಮ ನಿಂಗೆ ಗೊತ್ತೇನಮ್ಮ ...
ನಾವು ಚಾರಣಕ್ಕೆ ಬಂದ ಮೇಲೆ ಹತ್ತಬೇಕು ..
ನಾವು ಚಾರಣಿಗರೆಂದು ತೋರಿಸಬೇಕು ..
ನೋವುಗಳೆಂದು ಶಾಶ್ವತವಲ್ಲ ... ಹಿಡಿದ ದಾರಿಯ ಬಿಡುವುದು ಸಲ್ಲ...
ಮುತ್ತಿನಂತ ಮಾತೊಂದು ಗೊತ್ತೇನಮ್ಮ ನಿಂಗೆ ಗೊತ್ತೇನಮ್ಮ ...

ಇದೆ ಶಕ್ತಿ ಇರಬೇಕು ... ಅದು ಬಟ್ರ ಮನೆಗೆ ತಂದು ನಿಲ್ಲ್ಸಿದ್ದು ... ಅಲ್ಲಿ ಎಕ್ಕಾ ಚಿಕ್ಕಿ ಉಟ ಮಾಡಿ .. ಮುಂದೆ ಹೊರಟ್ವಿ ...
ಅಲಲಲಾ ಏನ್ ಚಂದ ಏನ್ ಚಂದ ... ಅ ಚಂದವೇ ಎಸ್ಟೋ ಜನರಿಗೆ ಹತ್ಲಿಕ್ಕೆ ಬಲ ಕೊಟ್ಟಿದ್ದು...
ಅದ್ರು  ಎಸ್ಟೋತ್ತು ಅಂತ  ಅದು ಇರತ್ತೆ ಹೇಳಿ... ಅವಗ್ಲೆ ಎಲ್ಲರೂ ಹೇಳಿದ್ದು..

ಎಲ್ಲಿಲ್ಲಿ ನೋಡಲಿ ... ಗಿರಿಗಳನೆ ಕಾಣುವೆ ...
ಕಾಲೆಲ್ಲ ನೋವಾಗಿ ... ಹತ್ತಲು ಬಲ ಇನ್ನೆಲ್ಲಿದೆ ....

ಪಾಪ ಇವರನ್ನು ನೋಡಿ .. ಅ ಪರ್ವತ ಎಷ್ಟು ನಕ್ಕಿತ್ತೋ ...
ಅದ್ರು ನೋಡಿ ಅಲ್ಲೇ ಎಲ್ಲೊ  ಸಣ್ಣ ಕಿಚ್ಚು ಇತ್ತು... ಅದೇ ಕೊನೆಗೆ ದೊಡ್ಡದು ಆಗ್ತಾ ಹೊಯಿತು ...
ಕಲ್ಲಿನ ಮಂಟಪ ದಾಟಿದಾಗ ಎಲ್ಲರೂ ಹೇಳಿದ್ದು ಒಂದೇ ....

ಆಗದು ಎಂದು ಕಲ್ಲಮೇಲೆ ಕುಳಿತರೆ ಸಾಗದು ಚಾರಣ ಮುಂದೆ....  ಸಾಗದು ಚಾರಣ ಮುಂದೆ...
ಮನಸೊಂದಿದ್ದರೆ ಮಾರ್ಗವು ಉಂಟು ...
ಹತ್ತು  ಶಿಖರವ ಇಂದೇ..... ಹತ್ತು ಶಿಖರವ ಇಂದೇ .....

ಹತ್ತಿ ಹತ್ತಿ ಹೋದ ನಮಗೆ ರಾತ್ರೆ ಆಗಿದ್ದೆ  ಗೊತ್ತಾಗಿಲ್ಲ...
ಆವಾಗ ನಾವು ಇದ್ಡಿದ್ದು ಗೊರಕಾರ  ಕಾನು...ಮೈಯೆಲ್ಲಾ ಒದ್ದೆ ..
ನಡೆದ ಬೆವರು ,ಹೆದರಿಕೆ ಬೆವರು ಎರಡು ಸೇರಿ ಯಾರು ಅನುಭವಿಸಿರದ ವಿಚಿತ್ರ ಸನ್ನಿವೇಶ ನಮ್ಮ ಪಾಲಿಗೆ ಕಾದಿತ್ತು ...
ಇಂತ ಸಮದಲ್ಲಿ  ಕೆಲವರು ಯಾವ್ದೋ ಲೋಕ್ಕಕ್ಕೆ ಹೋಗಿದ್ರು ...

ಯಾರೋ ಯಾರೋ ಗೀಚಿ ಹೋದ.... ನಡೆಯೋ ಹೊಗೆಯ ಬರಹಾ ...
ಅಬ್ಬಾ ರಾತ್ರಿ ಕಾಡಲ್ಲಿ ದಾರಿ  ಕಾಣದ ಸಮಯ...
ಪ್ರಾಣಿ ಇದೆ .. ಉಮ್ಬ್ಲ ಇದೆ ... ನಕ್ಸಲರ ಬಯವು ಏರುತಿದೆ ...
ಯಾರೋ ಯಾರೋ ಗೀಚಿ ಹೋದ.... ನಡೆಯೋ ಹೊಗೆಯ ಬರಹಾ ...

ಇದೆಂತ ರೀತಿ ನೀವೇ ನೋಡಿ....ಇದನ್ನ ನೋಡಿ ನಿಮೆಗೆ .. ಇವರಿಗೆ ಏಕೆ ಬೇಕಿತ್ತು .. ಮನೇಲಿ ಕೆಲಸ ಇರ್ಲಿಲ್ವ ಅಂತ ಅನ್ಸೋದು ಸಹಜ ...
ಆದ್ರೆ ಇದೆಲದಕ್ಕು  ಮೀರಿದ ಆನಂದ ಮುಂದಿದೆ...  ಅದೆಕ್ಕೆ ನಮ್ಮ ಜನ ತಯಾರಿ ಆಗಿದ್ದು ಹೀಗೆ ..
ಆಕಾಶವೇ ಬೀಳಲಿ ಮೇಲೆ... ಶಿಖರವನ್ನು ತಲಪುವೆವು ..
ನಕ್ಸಲರೇ ಹತ್ತಿರ ಬರಲಿ ... ಅವರೆದೆಯ ಮೆಟ್ಟುವೆವು...
ಬ್ಯಾಟರಿಗಳೇ ನಮಗಾದಾರ .... ಗುರಿ ತಲುಪಲು ಸಾಕಾರ..  

ಕೊನೆಯಲ್ಲಿ ಬಂದ ಶಕ್ತಿ .. ಇದು ಇ ಜನ್ಮದ್ದು ಅಲ್ಲ... ಈ ಜನ್ಮದ್ದು  ಯಾವಾಗ್ಲೋ ಮುಗಿದು ಹೋಗಿತ್ತು...
ಆದ್ರೆ ಈ ಶಕ್ತಿ  ಎಲ್ಲಿಂದ ಬಂತು ...ಪರ್ವತ ಶಕ್ತಿನ  ಜನರಿಗೆ ಕೊಡುತ್ತಾ  ಅಥವಾ ಅದ್ರ ಸೌಂದರ್ಯ ಇವರಿಗೆ ಬಲ ಕೊಟ್ಟಿದ್ಯ ???
ಗುರಿ ಮುಟ್ಟೋದು ಅಂದ್ರೆ ಇಷ್ಟು ಕಷ್ಟ ಇದ್ಯಾ ?? ಆದ್ರೆ ಕೊನೆಯೆಲ್ಲಿ  ಸಿಕ್ಕ ಆನಂದ ಹೇಗೆ ವರ್ಣಿಸ್ತಿರ ... ಅದಕ್ಕೆ ಶಬ್ದಗಳು  ಇದ್ಯಾ ???
ಇದೆಲ್ಲದರ ನಡುವೆ ನಮಗೆ ಕಾಣುವ  ಪ್ರಶ್ನೆ ಒಂದೇ .....   ಹೀಗು ಉಂಟೆ.!!!!!!

ಅದ್ರು ಕೊನೇಲಿ ನಮಗೆ ಸಿಕ್ಕ ಶಬ್ದಗಳು ಇವು ..

ಓಓಓ  ಎಂತ ಸೌಂದರ್ಯ ಕಂಡೆ.....
ಸತ್ಯ ಸ್ವರ್ಗವೋ....  ವನ್ಯರಶಿಯೋ  ....
ತುತ್ತತುದಿಯೋ .... ಕಾಣೆನಾ ...
ಓಓಓ  ಎಂತ ಸೌಂದರ್ಯ ಕಂಡೆ.....

ಇನ್ನು ಹತ್ತಿದ ನೆನಪುಗಳು ಕಾಲುಗಳ ಮೇಲೆ ಇದ್ದರು ನಮ್ಮ ಮನದ ಮೂಲೆಯಲ್ಲಿ ಒಂದು ದರ್ಪ ಮನೆ ಮಾಡಿತ್ತು ...

ದೂರದ ಊರಿಂದ ಹತ್ತಲು ಬಂದೆ ಕೈಯಲ್ಲಿ ವಜ್ಜೆ ತಂದೆ...
ಎದ್ರಿಗೆ ನಿಂತಿದ್ದ ಗಿರಿಯನ್ನು  ಕಂಡು ನೀನ್ಯಾವ ಲೆಕ್ಕೆ ಅಂದೇ...
ಹತ್ತದು ಕಷ್ಟಾತು  .... ಎಡೆ ಬಡಿತ ಹೆಚ್ಚತು..
ಅದ್ರು ಬಿಡದೆ .. ತುದಿ ಮುಟ್ಟಿ ... ದ್ವಜವ ನೆಟ್ಟಾತು...


ಇದು  ಇಷ್ಟಕ್ಕೆ ಮುಗಿತು ಅನ್ಕೋಬೇಡಿ... ಇನ್ನು ಒಂದು ರಾತ್ರಿ ಮತ್ತೆ ಒಂದು ದಿನ ಬಾಕಿ ಇದೆ..
ಅದೆಲ್ಲ ನೋಡೋಣ ಮುಂದಿನ ಸಂಚಿಕೆಯಲ್ಲಿ...

ಅಲ್ಲಿವರೆಗೂ ಎಲ್ಲರಿಗೂ ಶುಭ ರಾತ್ರಿ .. ಜೈ ಹಿಂದ್ 


ಕ್ಯಾಮರ ಮೆನ್ ನಾಗಿ ಜೊತೆ ಮಾಬ್ಲು ...
ಶಾಂತಂ ಪಾಪಂ ಟಿವಿ, ಕುಮಾರ ಪರ್ವತ ...  
   

(ತಪ್ಪಿದ್ದರೆ ಕ್ಷಮಿಸಿ .. ಇದು ನೈಜ ಕತೆಯೇನ್ನದರಿಸಿದ ಸತ್ಯ ಕತೆ..)
 [ಲೈಕ್ ಮಾಡಲು ಮರೆಯದಿರಿ  >> www.santhampapum.com ..  otherwise we will reconsider you]

ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ .....


ಗೆಳೆಯರೇ ,

ಮನದಾಳದ ಮಾತೆ ಪ್ರೀತಿ,
ಮೌನದ ಆಳವೆ ಪ್ರೀತಿ,
ಜೀವನದ ಬೇರು ಪ್ರೀತಿ,
ನಂಬಿಕೆಯ ಮರವೆ ಪ್ರೀತಿ,
ಅತ್ಮವಿಸ್ವಸದ ಚಿಲುಮೆ ಪ್ರೀತಿ,
ತಾಳ್ಮೆಯ ಒಡಲು ಪ್ರೀತಿ ,
ಸ್ನೇಹದ ಹೂವೇ ಪ್ರೀತಿ,
ಮರೆಯದ ನೆನಪೆ ಪ್ರೀತಿ,
ದಡವಿಲ್ಲದ ಸಮುದ್ರವೆ ಪ್ರೀತಿ,
ಕೊನೆ ಇಲ್ಲದ ಮುಗಿಲೇ ಪ್ರೀತಿ, 
ಗುರು ಇಲ್ಲದ ಕಲಿಕೆಯೇ ಪ್ರೀತಿ,
ಮಮತೆಯ ತಾಯಿಯೇ ಪ್ರೀತಿ,
ಬೆಸುಗೆಯ ತಂದೆಯೇ ಪ್ರೀತಿ ,
ತುದಿಇರದ ಕವನವೇ ಪ್ರೀತಿ,
ಮುಗಿಯದ ಕಥೆಯೆ ಪ್ರೀತಿ,
ಕಾಣುವ ಸ್ವರ್ಗವೇ ಪ್ರೀತಿ ,
ಕೈಸಿಗುವ ಕಾಮನಬಿಲ್ಲೆ ಪ್ರೀತಿ,
ಸಂಜೆಯ ತಂಗಾಳಿಯೇ ಪ್ರೀತಿ ,
ಬೆಳಗಿನ ರವಿಕಿರಣವೇ ಪ್ರೀತಿ,
ನೋವಲ್ಲಿನ ಸುಖವೇ ಪ್ರೀತಿ,
ಜೇನಲ್ಲಿನ ಸಿಹಿಯೇ ಪ್ರೀತಿ,
ಮನಸೊಳಗಿನ ನಗುವೇ ಪ್ರೀತಿ......


ಮಾಬ್ಲು/ಸುವಿ 

Thursday, March 18, 2010

ಇದು ಹೃದಯದ ವಿಷಯ .

ಜೀವನದ ಯಾವುದೊ ಒಂದು ಹಂತದಲ್ಲಿ ನಮಗೆ ಬರುವಂತ ವಿಚಾರಾತ್ಮಕ ವಿಷಯಗಳನೆಲ್ಲ ಒಂದೆಡೆ ಸಮೀಕರಿಸಿದಾಗ ಸಿಗುವ ಧನಾತ್ಮಕ ಪರಿಣಾಮವನ್ನು "ಹೃದಯದ ವಿಷಯ" ಎನ್ನಬಹುದು.